ನೋಡುತ್ತ
ಕನ್ನಡಿ
ಬಿರುಕು ಬಿಟ್ಟು
ಒಡೆದು ಚೂರಾಯ್ತು
ದೃಷ್ಟಿ ತಾಗಿರಬೇಕು
ಒಡೆದ ಚೂರುಗಳು
ಚುಚ್ಚಿ
ಅಂಗೈ ಅಳತೊಡಗಿತು
ಕೆಂಪಗಿತ್ತೇ ಕಣ್ಣೀರು?
ಒಂದು
ನೂರಾದ ಬಿಂಬದಲಿ
ಕಣ್ಣು ಮೂಗು ಮುಖ
ಹರಿದು
ಬಿಕ್ಕುತ್ತಿತ್ತು ಹೃದಯ
ಬಹಳಷ್ಟು ದಿನ
ಅದೇ ನೆನಪಲ್ಲಿ
ಕತ್ತಲಲ್ಲಿದ್ದ
ಮನೆಗೆ
ಸಂತೆಯೊಳಗಿಂದೊಂದು ಸಣ್ಣ
ಕನ್ನಡಿ
ಸೇರಿಕೊಂಡಿತು ಬಂದು
ಕನ್ನಡಿ
ಬೆಳ್ಳಿ ಕಟ್ಟಿನದು
ಹೊಸದು
ಎದುರು ನಿಂತರೆ
‘ಅದೇ ಮುಖ’
*****